ಉಡುಪಿ DC ಕಚೇರಿ ಆವರಣದಲ್ಲಿ ಮರಗಳ ಕಡಿತ..!

ಉಡುಪಿ DC ಕಚೇರಿ ಆವರಣದಲ್ಲಿ ಮರಗಳ ಕಡಿತ..!

ವಿದ್ಯುತ್ ತಂತಿ ಸ್ಥಳಾಂತರ ಬದಲು ಮರಗಳ ನಾಶಕ್ಕೆ ಆಕ್ರೋಶ; ಪರಿಸರ ಹೋರಾಟಗಾರರ ವಿರೋಧ


ಉಡುಪಿ:  ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹತ್ತಕ್ಕೂ ಹೆಚ್ಚು ಮರಗಳನ್ನು ಕಡಿತ ಮಾಡಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಣ್ಣಿನ ಮರಗಳು ಹಾಗೂ ಬೃಹತ್ ವೃಕ್ಷಗಳನ್ನು ಕಡಿದಿರುವುದು ಪರಿಸರ ಹೋರಾಟಗಾರರು ಹಾಗೂ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದೆ. ಇತ್ತೀಚೆಗೆ ಏಪ್ರಿಲ್ 24ರಂದು ಕಚೇರಿ ಆವರಣದಲ್ಲಿ ಮಾವಿನ ಕಾಯಿ ಕೀಳುವಾಗ ಮರದ ಮೇಲಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದರು. ಈ ಘಟನೆ ಬಳಿಕ ತಂತಿ ಸ್ಥಳಾಂತರಕ್ಕೆ ಒತ್ತಾಯ ಕೇಳಿಬಂದಿತ್ತು.

ಜಿಲ್ಲಾಧಿಕಾರಿ ಕೊಠಡಿ ಬಳಿ ಇದ್ದ ದೊಡ್ಡ ಮರಗಳು ಪಕ್ಷಿಗಳಿಗೆ ಆಶ್ರಯವಾಗಿದ್ದವು. ಅವುಗಳನ್ನು ಕಡಿದಿರುವುದು ಪರಿಸರ ಹಾನಿಗೆ ಕಾರಣವಾಗಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಮೂಲಸೌಕರ್ಯ ಬದಲಾವಣೆ ಮಾಡುವ ಬದಲು ಮರಗಳನ್ನು ಕಡಿದಿರುವುದು ತಪ್ಪು ನಿರ್ಧಾರ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *