ಮತ್ತಿನ ಅಮಲಿನಲ್ಲಿ ಪತ್ನಿ ಹ*ತ್ಯೆ: ಹಾಸನದಲ್ಲಿ ನಡೆದ ದಾರುಣ ಘಟನೆ

ಮತ್ತಿನ ಅಮಲಿನಲ್ಲಿ ಪತ್ನಿ ಹ*ತ್ಯೆ: ಹಾಸನದಲ್ಲಿ ನಡೆದ ದಾರುಣ ಘಟನೆ

ಹಾಸನ : ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆ ಗ್ರಾಮದಲ್ಲಿ ಪತಿ-ಪತ್ನಿ ಜಗಳವು ಕೊಲೆಗೇ ತಿರುಗಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಪ್ರತಿದಿನ ಮದ್ಯಪಾನ ಮಾಡಿ ಮನೆಗೆ ಬಂದು ಹೆಂಡತಿಯ ಜೊತೆ ಜಗಳವಾಡುತ್ತಿದ್ದ ರಘು, ಈ ಬಾರಿ ನಿಯಂತ್ರಣ ತಪ್ಪಿ ತನ್ನ ಪತ್ನಿ ರೇಖಾ (38) ಅವರನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.

ಘಟನೆ ಸಮಯದಲ್ಲಿ ದಂಪತಿಯ ಮಕ್ಕಳು ಟ್ಯೂಷನ್ ಕ್ಲಾಸ್‌ಗೆ ಹೋಗಿದ್ದು, ಮನೆದಲ್ಲಿ ರೇಖಾ ಒಬ್ಬರೇ ಇದ್ದರು. ಈ ವೇಳೆ ನಡೆದ ವಾಗ್ವಾದ ಕೊನೆಗೆ ಹತ್ಯೆಗೆ ಕಾರಣವಾಯಿತು.ಕೊಲೆ ಮಾಡಿದ ಬಳಿಕ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.ಪ್ರತಿದಿನದ ಮದ್ಯಪಾನದ ಹಾವಳಿಯಿಂದಲೇ ಈ ಕುಟುಂಬದಲ್ಲಿ ಗಲಾಟೆಗಳು ನಡೆಯುತ್ತಿದ್ದು, ಕೊನೆಗೆ ಪತ್ನಿಯ ಜೀವವನ್ನೇ ಬಲಿ ತೆಗೆದುಕೊಂಡಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *