ಲೋಕಾಯುಕ್ತ ಬಲೆಗೆ PSI – PC : ಕೆರೂರು ಠಾಣೆಯಲ್ಲಿ ಪಟಾಕಿ ಸಂಭ್ರಮ

ಲೋಕಾಯುಕ್ತ ಬಲೆಗೆ PSI - PC : ಕೆರೂರು ಠಾಣೆಯಲ್ಲಿ ಪಟಾಕಿ ಸಂಭ್ರಮ

ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಬಂಧನ – ಯುವಕರಿಂದ ಠಾಣೆ ಮುಂದೆ ಸಂಭ್ರಮಾಚರಣೆ

ಬಾಗಲಕೋಟೆ: ಇಸ್ಪೀಟ್ ಆಡುವವರ ಬಳಿ ಲಂಚ ಸ್ವೀಕರಿಸುವಾಗ ಪೊಲೀಸ್​ ಸಬ್ ಇನ್ಸ್​ಪೆಕ್ಟರ್ ಹಾಗೂ ಕಾನ್ಸ್​​​ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರು ಠಾಣೆಯ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​​ ಭೀಮಪ್ಪ ರಬಕವಿ ಹಾಗೂ ಕಾನ್ಸ್​ಟೇಬಲ್ ಸಂತೋಷ್ ಬಿರಾದಾರ ಎನ್ನುವರು ಮುತ್ತಪ್ಪ ನಾಯ್ಕರ್​ ಎಂಬುವರಿಂದ ಲಂಚ ಸ್ವೀಕರಿಸುವಾಗ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದರಿಂದ ಯುವಕ ಗುಂಪು ಕೆರೂರು ಪೊಲೀಸ್ ಠಾಣೆ ಮುಂದೆಯೇ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದೆ.

ಇಸ್ಪೀಟ್ ಆಡುತ್ತಿದ್ದ ಓರ್ವ ಆರೋಪಿ ರಕ್ಷಣೆಗೆ ಮುಂದಾಗಿದ್ದ ಪೊಲೀಸರು, ಬೈಕ್ ಬಿಡಲು 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಮುತ್ತಪ್ಪ ನಾಯ್ಕರ್ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರಿನ ಅನ್ವಯ ಲೋಕಾಯುಕ್ತ SP ಮಹಾಲಿಂಗ ನಂದಗಾಂವಿ ಮಾರ್ಗದರ್ಶನದಲ್ಲಿ ದಾಳಿ ನಡೆಸಿ, ಪಿಎಸ್​ಐ ಭೀಮಪ್ಪ, ಪಿಸಿ ಬಿರಾದಾರನನ್ನು 1.70 ಲಕ್ಷ ಲಂಚ ಸ್ವೀಕರಿಸುವಾಗ ಹಿಡಿದಿದ್ದರು. ಇದರ ಬೆನ್ನಲ್ಲೇ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಇನ್ಸ್​​ಪೆಕ್ಟರ್ ಭೀಮಪ್ಪ ತಮ್ಮ ವರ್ತನೆಯಿಂದ ಸಾರ್ವಜನಿಕರ ವಿರೋಧ ಕಟ್ಟಿಕೊಂಡಿದ್ದರು. ಅಲ್ಲದೇ ಪಿಎಸ್​​ಐ ವಿರುದ್ಧ ಹಲವು ಆರೋಪ ಕೇಳಿಬಂದಿದ್ದವು. ಇದೀಗ ಲೋಕಾಯುಕ್ತಕ್ಕೆ ಬಲೆಗೆ ಬೀಳುತ್ತಿದ್ದಂತೆಯೇ ಜನರು ಫುಲ್ ಖುಷ್ ಆಗಿದ್ದಾರೆ. ಇನ್ನು ಇನ್ಸ್​​ಪೆಕ್ಟರ್​ ಏನೆಲ್ಲಾ ಕೆಟ್ಟ ಕೆಲಸ ಮಾಡಿದ್ದಾರೆ ಎನ್ನುವುದನ್ನು ಸಾಕ್ಷಿ ನೀಡುತ್ತೇವೆ. ಹೀಗಾಗಿ ಎಸ್ಪಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಈ ಘಟನೆ ಅಚ್ಚರಿ ಮೂಡಿಸಿದೆ. ಯಾಕಂದ್ರೆ, ಓರ್ವ ಪಿಎಸ್​ಐ ಲೋಕಾಯುಕ್ತ ಬಲಿಗೆ ಬಿದ್ದಿದ್ದರಿಂದ ಈ ಪರಿ ಸಂಭ್ರಮಾರಣೆ ಮಾಡುತ್ತಿರುವುದು ಅಪರೂಪ. ಇದರ ಅರ್ಥ ಪಿಎಸ್​​ಐ ಕಾರ್ಯವೈಖರಿ ತೋರಿಸುತ್ತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *