ಪೋಕ್ಸೋ ಆರೋಪಿಯ *ತ್ಯೆ: ರಾಜಕಾಲುವೆಯಲ್ಲಿ ಶ* ಪತ್ತೆ.!

ಪೋಕ್ಸೋ ಆರೋಪಿಯ *ತ್ಯೆ: ರಾಜಕಾಲುವೆಯಲ್ಲಿ ಶ* ಪತ್ತೆ.!

ಪ್ರತೀಕಾರದ ಹಿನ್ನಲೆ ಕೊ*ಆರೋಪ; ಯಲಹಂಕದಲ್ಲಿ ಬೆಳಕಿಗೆ ಬಂದ ಭೀಕರ ಪ್ರಕರಣ.!

ಬೆಂಗಳೂರು: ಪೋಕ್ಸೋ ಪ್ರಕರಣದ ಆರೋಪಿಯಾಗಿದ್ದ ವ್ಯಕ್ತಿಯನ್ನು ಹತ್ಯೆ ಮಾಡಿ ಶವವನ್ನು ರಾಜಕಾಲುವೆಗೆ ಎಸೆದಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಬಾಗಲಕೋಟೆ ಮೂಲದ ರಮೇಶ್ (36) ಮೃತ ವ್ಯಕ್ತಿ. ಯಲಹಂಕ ಸಮೀಪದ ಅಲ್ಲಾಳಸಂದ್ರ ರಾಜಕಾಲುವೆಯಲ್ಲಿ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು.

ಪ್ರಕರಣದಲ್ಲಿ ಬಾಲಕಿಯ ತಂದೆ ಸೇರಿ ಚಿನ್ನಯ್ಯ (29), ಚೇತನ (26) ಮತ್ತು ವಿನಾಯಕ (19)ರನ್ನು ಬಂಧಿಸಲಾಗಿದೆ. ರಮೇಶ್ ವಿರುದ್ಧ 2022ರಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಜೈಲಿನಿಂದ ಬಿಡುಗಡೆಯಾದ ಬಳಿಕ ಮತ್ತೆ ಬಾಲಕಿಯ ಸಂಪರ್ಕಕ್ಕೆ ಬಂದಿದ್ದಾನೆ ಎನ್ನಲಾಗಿದೆ.

ಮಗಳ ಭವಿಷ್ಯ ಬಗ್ಗೆ ಆತಂಕಗೊಂಡ ತಂದೆ ಪ್ರತೀಕಾರದ ರೂಪದಲ್ಲಿ ಸ್ನೇಹಿತರನ್ನು ಬಳಸಿ ಕೊಲೆ ಮಾಡಿಸಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಆರೋಪಿಗಳು ರಮೇಶ್ ಅನ್ನು ಬಾರ್ಗೆ ಕರೆದುಕೊಂಡು ಹೋಗಿ ಹತ್ಯೆ ಮಾಡಿ, ಬಳಿಕ ಶವವನ್ನು ಕಾಲುವೆಗೆ ಎಸೆದಿದ್ದಾರೆ. ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *