ಬೆಂಗಳೂರು ಆಟೋ ಪ್ರಯಾಣ ದರ ಶೇ. 39 ರಷ್ಟು ದುಬಾರಿ?: ಕನಿಷ್ಠ ಬಾಡಿಗೆ 50 ಕ್ಕೆ ಏರಿಸಲು ಚಾಲಕರ ಪಟ್ಟು..!

ಬೆಂಗಳೂರು ಆಟೋ ಪ್ರಯಾಣ ದರ ಶೇ. 39 ರಷ್ಟು ದುಬಾರಿ?: ಕನಿಷ್ಠ ಬಾಡಿಗೆ ₹50 ಕ್ಕೆ ಏರಿಸಲು ಚಾಲಕರ ಪಟ್ಟು..!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಆಟೋ ಪ್ರಯಾಣದ ಕನಿಷ್ಠ ದರ ಸುಮಾರು ಶೇಕಡಾ 39 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ..!

ಬೆಂಗಳೂರು: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ನಗರದಲ್ಲಿ ಆಟೋ ಎಲ್‌ಪಿಜಿ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು ಹಾಗೂ ಗ್ಯಾಸ್ ಕೊರತೆ ಎದುರಾಗಿರುವುದರಿಂದ ಆಟೋ ಚಾಲಕರ ಸಂಘಟನೆಗಳು ಪ್ರಯಾಣ ದರ ಪರಿಷ್ಕರಣೆಗೆ ತೀವ್ರ ಒತ್ತಾಯ ಹೇರಿವೆ.

ಯುದ್ಧದ ಕಾರಣದಿಂದ ಸಿಲಿಂಡರ್‌ ಬೆಲೆ ತುಂಬಾ ಹೆಚ್ಚಳವಾಗಿದ್ದು, ಇದರಿಂದ ಆಟೋ ಚಾಲಕರ ಸಂಘ ಜಿಲ್ಲಾಧಿಕಾರಿಗಳಿಗೆ ಪ್ರತೀ ಕಿಲೋಮೀಟರ್‌ ಮೇಲೆ 25 ರೂಪಾಯಿ ಹೆಚ್ಚಳ ಹಾಗೂ ಕನಿಷ್ಠ ಪ್ರಯಾಣದರವನ್ನು 36 ರಿಂದ 50 ಕ್ಕೆ ಹೆಚ್ಚಿಸಲು ಬೇಡಿಕೆ ಸಲ್ಲಿಸಿದೆ.

ಈಗಾಗಲೇ ಕನಿಷ್ಠ ಮೀಟರ್‌ ದರ 36 ರೂ. ನಿಗದಿಯಾಗಿದ್ದು, ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ 18 ರೂ. ನಿಗದಿಪಡಿಸಲಾಗಿದೆ. ಎಲ್‌ಪಿಜಿ ದರ ಏರಿಕೆ ಹೊರೆ ತಪ್ಪಿಸಲು ಕನಿಷ್ಠ ದರವನ್ನು 50 ರೂ., ಪ್ರತಿ ಕಿಲೋಮೀಟರ್‌ಗೆ ಹೆಚ್ಚುವರಿ ದರವನ್ನು 25 ರೂ. ಹೆಚ್ಚಿಸುವಂತೆ ಆಟೋ ಚಾಲಕರ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿವೆ.

ಮಧ್ಯಪ್ರಾಚ್ಯದ ಬಿಕ್ಕಟ್ಟಿಗೆ ಮುನ್ನ ಲೀಟರ್‌ಗೆ ₹50 ರಿಂದ ₹60 ಆಸುಪಾಸಿನಲ್ಲಿದ್ದ ಆಟೋ ಎಲ್‌ಪಿಜಿ ದರವು ಈಗ ಸರ್ಕಾರಿ ಬಂಕ್‌ಗಳಲ್ಲೇ ₹90 ರಿಂದ ₹95 ಕ್ಕೆ ತಲುಪಿದೆ. ಕೆಲವು ಖಾಸಗಿ ಬಂಕ್‌ಗಳಲ್ಲಿ ಲೀಟರ್‌ಗೆ ₹106 ರಿಂದ ₹115 ರವರೆಗೆ ದುಬಾರಿ ದರ ವಸೂಲಿ ಮಾಡಲಾಗುತ್ತಿದೆ.

ಈಗಾಗಲೇ ಆಯಪ್ ಆಧಾರಿತ ಆಟೋ ಬುಕಿಂಗ್‌ಗಳಲ್ಲಿ ಹೆಚ್ಚಿನ ದರ ನೀಡುತ್ತಿರುವ ಪ್ರಯಾಣಿಕರು, ಅಧಿಕೃತ ಮೀಟರ್ ದರವನ್ನೂ ₹50 ಕ್ಕೆ ಏರಿಸಿದರೆ ದೈನಂದಿನ ಬಜೆಟ್ ಏರುಪೇರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಕೆಲವು ಚಾಲಕರು ಗ್ಯಾಸ್ ಸಮಸ್ಯೆಯ ನೆಪ ಒಡ್ಡಿ ಪ್ರಯಾಣಿಕರಿಂದ ಶೇ. 10 ರಷ್ಟು ಹೆಚ್ಚುವರಿ ಬಾಡಿಗೆಯನ್ನು ಸ್ವಯಂಪ್ರೇರಿತವಾಗಿ ವಸೂಲಿ ಮಾಡುತ್ತಿರುವ ಘಟನೆಗಳೂ ವರದಿಯಾಗಿವೆ.

For More Updates Join our WhatsApp Group :  

https://chat.whatsapp.com/JVoHqE476Wn3pVh1gWNAcH

                                  

Leave a Reply

Your email address will not be published. Required fields are marked *