ಹೈದರಾಬಾದ್: ಪ್ರಾಣಿ ಪ್ರಪಂಚವೇ ಒಂದು ವಿಸ್ಮಯ. ಮೊಗೆದಷ್ಟೂ ಅದು ವಿಸ್ತೃತವೇ. ಪರಿಸರ ವ್ಯವಸ್ಥೆಯಲ್ಲಿ ಕಶೇರುಕಗಳು ಮತ್ತು ಉಭಯವಾಸಿಗಳು ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಹಲವು ವಿಶೇಷ ಪ್ರಭೇದಗಳು ಭೂಮಿ ಮೇಲೆ ಇನ್ನೂ ಉಳಿದುಕೊಂಡಿದ್ದರೆ, ಇನ್ನೂ ಕೆಲವು ನಶಿಸಿ ಹೋಗಿವೆ. ಅಂತಹ ಅಪರೂಪದ ಉಭಯಚರ ಜೀವಿಯನ್ನು ವಿಜ್ಞಾನಿಗಳು ಆಂಧ್ರಪ್ರದೇಶದಲ್ಲಿ ಕಂಡು ಹಿಡಿದಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶೇಷಾಚಲಂ ಬೆಟ್ಟಗಳಲ್ಲಿ ಸ್ಯೂಡೋಫಿಲಾಟಸ್ ರೆಜಿಯಸ್ ಎಂಬ ಅಪರೂಪದ ಕಪ್ಪೆಯನ್ನು ಕಂಡುಹಿಡಿದಿದ್ದಾರೆ. ಜೊತೆಗೆ, ಗೌನಿತಿಮ್ಮೆಪಲ್ಲಿಯ ಪಲಮನೇರು ಕೌಂಡಿನ್ಯ ಅರಣ್ಯ ಪ್ರದೇಶದ ಬಳಿಯ ಕೊಳದಲ್ಲಿ ಶ್ರೀಲಂಕಾ ಮೂಲದ ಗೋಲ್ಡನ್ ಬ್ಯಾಕ್ಡ್ ಫ್ರಾಗ್ ರಾನಾ ಗ್ರ್ಯಾಸಿಲಿಸ್ ಎಂಬ ಮತ್ತೊಂದು ಕಪ್ಪೆಯನ್ನು ಪತ್ತೆ ಮಾಡಿದ್ದಾರೆ. ಆಂಧ್ರಪ್ರದೇಶ ಜೀವವೈವಿಧ್ಯ ಮಂಡಳಿಯ ಸದಸ್ಯರೊಂದಿಗೆ ಹೈದರಾಬಾದ್ ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾದ ವಿಜ್ಞಾನಿಗಳು ಇವನ್ನು ಕಂಡು ಹಿಡಿದಿದ್ದಾರೆ.
ಪಶ್ಚಿಮಘಟ್ಟಗಳಲ್ಲಿ ಹೆಚ್ಚಿದ ಜೀವವೈವಿಧ್ಯ: ವಿಶ್ವದಲ್ಲಿ ಹವಾಮಾನ ಬದಲಾವಣೆ ಮಾನವ ಸೇರಿ ಪ್ರಾಣಿ ಪ್ರಪಂಚವನ್ನೇ ಅಲುಗಾಡಿಸಿದೆ. ಹೀಗಾಗಿ ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಜೀವಿಗಳು ವಲಸೆ ಬರುತ್ತಿವೆ. ಪೂರ್ವ ಘಟ್ಟಗಳು ಉತ್ತಮ ಪರಿಸರ ಮತ್ತು ಜೀವವೈವಿಧ್ಯತೆಗೆ ಸಾಕ್ಷಿಯಾಗಿವೆ. ಇಲ್ಲಿ ಶ್ರೀಲಂಕಾ ಬ್ರೌನ್ ಇಯರ್ಡ್ ಪ್ರೆಬ್ ಫ್ರಾಗ್, ಶ್ರೀಲಂಕಾ ಗೋಲ್ಡನ್ ಬ್ಯಾಕ್ಡ್ ಕಪ್ಪೆ ಕಂಡುಬಂದಿದೆ. ಅವನ್ನು ಹೈದರಾಬಾದ್ನ ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾದ ಝಡ್‌ಎಸ್‌ಐ ಕಚೇರಿಗೆ ತಂದು ಡಿಎನ್‌ಎ ಪರೀಕ್ಷೆ ನಡೆಸಲಾಗಿದೆ.