ಜನರ ಆಶೀರ್ವಾದದಿಂದ ಮುಂದುವರಿಯುವೆ: ಕೊಪ್ಪಳದಲ್ಲಿ ಸಚಿವ ಶಿವರಾಜ್ ಎಸ್. ತಂಗಡಗಿ ಹೇಳಿಕೆ.
ಕೊಪ್ಪಳ: “ಜನರ ಆಶೀರ್ವಾದ, ಕನಕ ಚಲಪತಿ ಕೃಪೆಯಿಂದ ಸಚಿವ ಸಂಪುಟ ಸರ್ಜರಿ ಬಳಿಕವೂ ಸಚಿವನಾಗಿರುತ್ತೇನೆ ಎಂಬ ಭರವಸೆ ನನಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್.ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದರು.
ಕೊಪ್ಪಳದಲ್ಲಿನ ಕಾರ್ಯಕ್ರಮದ ಬಳಿಕ ಸುದ್ದಿಗಾರರು, “ಸಚಿವ ಸಂಪುಟ ಸರ್ಜರಿ ಬಳಿಕ ನಿಮ್ಮ ಸ್ಥಾನ-ಮಾನದ ಕತೆ ಏನು”? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಸಚಿವ ಸುಂಪಟದ ಸರ್ಜರಿ ಅವಶ್ಯಕತೆ ಇದೆ. ಏಳೆಂಟು ವರ್ಷಗಳಿಂದ ಶಾಸಕರಾಗಿರುವವರಿಗೆ ಸಚಿವರಾಗುವ ಆಸೆ ಇದ್ದೇ ಇದೆ. ಹೀಗಾಗಿ ಹೈಕಮಾಂಡ್ ಭೇಟಿಗೆ ಹೋಗುವುದು ಸಹಜ. ಜನರ ಆಶೀರ್ವಾದ, ಕನಕ ಚಲಪತಿಯ ಕೃಪೆಯಿಂದ ಮುಂದೆ ಸಹ ಸಚಿವ ಸ್ಥಾನದಲ್ಲಿ ಮುಂದುವರೆಯತ್ತೇನೆ” ಎಂದರು.
“ವರಿಷ್ಠರು ಹೈಕಮಾಂಡ್ ಭೇಟಿ ಮಾಡುವುದರಲ್ಲಿ ತಪ್ಪೇನಿದೇ?, ಕೇಂದ್ರದ ಎಚ್.ಡಿ. ಕುಮಾರ ಸ್ವಾಮಿ ಅಥವಾ ಅಮಿತ್ ಶಾ ಅವರನ್ನು ಭೇಟಿ ಮಾಡಲು ನಮ್ಮ ಪಕ್ಷದವರು ತೆರಳಿಲ್ಲ. ಕಾಂಗ್ರೆಸ್‌ದವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ?, ರಾಜಕಾರಣ ಎಂದ ಮೇಲೆ, ಕೇಳುವುದು, ಹೇಳುವುದು ಹೀಗೆ ಹಲವು ವಿಚಾರಗಳಿರುತ್ತವೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಇದರಲ್ಲಿ ತಪ್ಪೇನಿದೆ? ಎಂದು ಪತ್ರಕರ್ತರನ್ನೇ ಮರು ಪ್ರಶ್ನಿಸಿದರು.
For More Updates Join our WhatsApp Group :




