GBA ಗುಣನಿಯಂತ್ರಣ ಲ್ಯಾಬ್ ಸ್ಥಗಿತ: ಬೆ*ಕಿ ದುರಂತದ ಬಳಿಕವೂ ನಿರ್ಲಕ್ಷ್ಯ ಆರೋಪ

GBA ಗುಣನಿಯಂತ್ರಣ ಲ್ಯಾಬ್ ಸ್ಥಗಿತ: ಬೆ*ಕಿ ದುರಂತದ ಬಳಿಕವೂ ನಿರ್ಲಕ್ಷ್ಯ ಆರೋಪ

ಹೊಸ ಲ್ಯಾಬ್ ನಿರ್ಮಾಣ ವಿಳಂಬ; ಅಧಿಕಾರಿಗಳ ವಿರುದ್ಧ ಆಕ್ರೋಶ ಹೆಚ್ಚಳ

ಬೆಂಗಳೂರು: ಸಿಲಿಕಾನ್ ಸಿಟಿಯ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆ ಪ್ರಮುಖವಾಗಿದ್ದ ಬಿಬಿಎಂಪಿ (ಜಿಬಿಎ) ಗುಣನಿಯಂತ್ರಣ ಪ್ರಯೋಗಾಲಯವು ಪ್ರಸ್ತುತ ಕಾರ್ಯನಿರ್ವಹಣೆಯಿಲ್ಲದೆ ಸ್ಥಗಿತಗೊಂಡಿದೆ. ಎರಡು ವರ್ಷಗಳ ಹಿಂದೆ ಸಂಭವಿಸಿದ ಭೀಕರ ಬೆಂಕಿ ಅವಘಡದ ಬಳಿಕವೂ ಲ್ಯಾಬ್ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳದಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಬೆ*ಕಿ ದುರಂತದ ನಂತರ ಸುಸಜ್ಜಿತ ಹೊಸ ಲ್ಯಾಬ್ ನಿರ್ಮಿಸುವ ಭರವಸೆ ನೀಡಲಾಗಿದ್ದರೂ, ಅದಕ್ಕೆ ಇನ್ನೂ ಮುಹೂರ್ತವೇ ಬಂದಿಲ್ಲ. ಪರಿಣಾಮವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಧುನಿಕ ಯಂತ್ರೋಪಕರಣಗಳು ಬಳಕೆಯಾಗದೇ ಧೂಳು ಹಿಡಿಯುತ್ತಿವೆ.

ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್. ರಮೇಶ್ ಅವರು ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಭ್ರಷ್ಟಾಚಾರವನ್ನು ಮುಚ್ಚಿಡಲು ಲ್ಯಾಬ್ ಕಾರ್ಯನಿರ್ವಹಣೆಯನ್ನು ಉದ್ದೇಶಪೂರ್ವಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.ಗುಣಮಟ್ಟ ತಪಾಸಣೆ ವ್ಯವಸ್ಥೆ ದುರ್ಬಲವಾಗಿರುವುದರಿಂದ ನಗರ ಮೂಲಸೌಕರ್ಯಗಳ ಭದ್ರತೆ ಮತ್ತು ಗುಣಮಟ್ಟದ ಬಗ್ಗೆ ಆತಂಕ ಹೆಚ್ಚಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *