26 ತಿಂಗಳ ಬಾಕಿಗೆ ಮೊದಲ ಹಂತದ ಪಾವತಿ; ಉಳಿದ ಮೊತ್ತ ಬಿಡುಗಡೆಗೆ ಒತ್ತಾಯ
ಬೆಂಗಳೂರು : ಹಲವು ದಿನಗಳಿಂದ ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವೆ ಹಲವು ಬೇಡಿಕೆಗಳ ಕುರಿತು ಭಾರೀ ಗೊಂದಲಗಳು ಉಂಟಾಗಿದೆ. ಇದಕ್ಕಾಗಿ ಪ್ರತಿಭಟನೆಗಳನ್ನು ಕೂಡ ನಡೆಸಿದರು. ಆದರೆ ಇದೀಗ ಸಾರಿಗೆ ನೌಕರರಿಗೆ ಬಿಗ್ ಗುಡ್ ನ್ಯೂಸ್ ನೀಡಿದೆ. ದೀರ್ಘಕಾಲದ ಕಾಯುವಿಕೆಯ ನಂತರ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಬಾಕಿ ಇರುವ ವೇತನ ಹಿಂಬಾಕಿಯನ್ನು ಪಾವತಿಸಲು ಮೊದಲ ಹಂತದಲ್ಲಿ 450 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸಾರಿಗೆ ಸಂಸ್ಥೆಯ ನೌಕರರಿಗೆ ಕಳೆದ 26 ತಿಂಗಳ ವೇತನ ಹಿಂಬಾಕಿಯಾಗಿ ಒಟ್ಟು 1,271.92 ಕೋಟಿ ರೂ. ಬಿಡುಗಡೆ ಮಾಡಬೇಕಿತ್ತು. ಆದರೆ, ಪ್ರಸ್ತುತ ಹಣಕಾಸಿನ ಲಭ್ಯತೆಯ ಆಧಾರದ ಮೇಲೆ ಮೊದಲ ಹಂತವಾಗಿ ಸರ್ಕಾರ ₹450 ಕೋಟಿಯನ್ನು ಬಿಡುಗಡೆ ಮಾಡಿದೆ.
ನಿಗಮವಾರು ಹಣ ಹಂಚಿಕೆ ಹೇಗೆ?
KSRTC (ಕೆಎಸ್ಆರ್ಟಿಸಿ): 143.85 ಕೋಟಿ ರೂ.
BMTC (ಬಿಎಂಟಿಸಿ): 137.24 ಕೋಟಿ ರೂ.
NWKRTC (ವಾಯುವ್ಯ ಕರ್ನಾಟಕ ಸಾರಿಗೆ): 87.00 ಕೋಟಿ ರೂ.
KKRTC (ಕಲ್ಯಾಣ ಕರ್ನಾಟಕ ಸಾರಿಗೆ): 81.91 ಕೋಟಿ ರೂ.
ಈ ಅನುದಾನವು ಸಾರಿಗೆ ನೌಕರರ ಆರ್ಥಿಕ ಸಂಕಷ್ಟವನ್ನು ಸ್ವಲ್ಪಮಟ್ಟಿಗೆ ನೀಗಿಸಲಿದ್ದು, ಬಾಕಿ ಇರುವ ಉಳಿದ ಮೊತ್ತವನ್ನು ಮುಂದಿನ ಹಂತಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಮೊದಲ ಹಂತದ ಬಿಡುಗಡೆಯನ್ನು ಸ್ವಾಗತಿಸಿದರೂ, ಬಾಕಿ ಇರುವ ಸುಮಾರು 821.92 ಕೋಟಿ ರೂ. ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ನೌಕರರ ಒಕ್ಕೂಟಗಳು ಒತ್ತಾಯಿಸುತ್ತಿವೆ. ಸರ್ಕಾರವು ಸಮಯ ಮಿತಿಯೊಳಗೆ ಪೂರ್ಣ ಹಣ ಬಿಡುಗಡೆ ಮಾಡದಿದ್ದರೆ ಮತ್ತೆ ಪ್ರತಿಭಟನೆ ಮಾಡಲಾಗುವುದು ಎಂಬ ಮಾತುಗಳು ಕೇಳಿ ಬಂದಿದೆ.
For More Updates Join our WhatsApp Group :




