ಪಾರ್ಕಿಂಗ್ ಕಟ್ಟಡಗಳು ಖಾಸಗಿಯವರಿಗೆ ಉತ್ತೇಜನ.!

ಪಾರ್ಕಿಂಗ್ ಕಟ್ಟಡಗಳು ಖಾಸಗಿಯವರಿಗೆ ಉತ್ತೇಜನ.!

ಡಬಲ್ ಡೆಕ್ಕರ್, ಪಾರ್ಕಿಂಗ್ ಕಟ್ಟಡ, ಮೇಲ್ಸೆತುವೆ, ಅಂಡರ್ ಪಾಸ್ ಬ್ರಾಂಡ್ ಬೆಂಗಳೂರು ನಿರ್ಮಿಸಲು ಸಹಕಾರಿ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: “ಡಬಲ್ ಡೆಕ್ಕರ್, ಪಾರ್ಕಿಂಗ್ ಕಟ್ಟಡ, ಮೇಲ್ಸೆತುವೆ, ಅಂಡರ್ ಪಾಸ್ ಎಲ್ಲವೂ ಬ್ರಾಂಡ್ ಬೆಂಗಳೂರು ನಿರ್ಮಿಸಲು ಸಹಕಾರಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಎಂ.ಜಿ. ರಸ್ತೆಯಲ್ಲಿ ಮೆಟ್ರೋ ಮಾರ್ಗದ ಕಂಬಗಳಿಗೆ ಡೈನಾಮಿಕ್ ಲೈಟಿಂಗ್ ವ್ಯವಸ್ಥೆ,  ಕೆ.ಆರ್. ಮಾರುಕಟ್ಟೆಯಲ್ಲಿ ನೆಲಮಹಡಿ ವಾಹನ ನಿಲುಗಡೆ ಸಂಕೀರ್ಣದ ಕಾರ್ಯಾಚರಣೆ ಮತ್ತು ನಿರ್ವಹಣೆ, ಬನಶಂಕರಿ ಬಸ್ ನಿಲ್ದಾಣದ ಜಂಕ್ಷನ್ ನಲ್ಲಿ ಸ್ಕೈವಾಕ್ ನಿರ್ಮಾಣ ಕಾಮಗಾರಿಗೆ ಶಿವಕುಮಾರ್ ಅವರು ಶುಕ್ರವಾರ ಚಾಲನೆ ನೀಡಿದರು. ಈ ವೇಳೆ ಕಾರ್ಯಕ್ರಮಗಳಲ್ಲಿ ಹಾಗೂ ಮಾಧ್ಯಮಗಳ ಜೊತೆ ಮಾತನಾಡಿದರು.

“ಕೆ.ಆರ್ ಮಾರ್ಕೆಟ್ ಅಲ್ಲಿ ನೂತನ ಪಾರ್ಕಿಂಗ್ ಕಟ್ಟಡ ಲೋಕಾರ್ಪಣೆ ಮಾಡಿದ್ದು ಇದರ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲಾಗಿದೆ‌. ವಾಹನ ನಿಲುಗಡೆಗೆ ಹೆಚ್ಚು ಶುಲ್ಕ ವಿಧಿಸಿಲ್ಲ. ಸುತ್ತಮುತ್ತ 1 ಕಿ.ಮೀ ಯಾರೂ ವಾಹನ ನಿಲ್ಲಿಸಬಾರದು ಎಂದು ಪೊಲೀಸರು ತಿಳಿಸಬೇಕು. ಅಂಗಡಿ ಮಾಲೀಕರು ವಾಹನಗಳನ್ನು ಅಲ್ಲಿಯೇ ನಿಲ್ಲಿಸಬೇಕು. ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ಟೋ ಮಾಡಲಾಗುವುದು” ಎಂದರು‌.

ನಗರದಲ್ಲಿ ಸುಮಾರು 44 ಕಿ.ಮೀ ಉದ್ದದ ಡಬಲ್ ಡೆಕ್ಕರ್

“ನಗರದಲ್ಲಿ ಸುಮಾರು 44 ಕಿ.ಮೀ ಉದ್ದದ ಡಬಲ್ ಡೆಕ್ಕರ್ ನಿರ್ಮಾಣಕ್ಕೆ ಆಲೋಚನೆ ಹಾಕಿದ್ದೇವೆ. ಇದರ ಬಗ್ಗೆ ಈ ಹಿಂದೆಯೇ ಆಲೋಚನೆ ಮಾಡಿದಿದ್ದರೆ 336 ಕಿಮೀ ಉದ್ದದ ಮೆಟ್ರೋ ಯೋಜನೆಯಲ್ಲಿ ಸುಮಾರು 200 ಕಿಮೀ ಉದ್ದವಾದರೂ ಡಬಲ್ ಡೆಕ್ಕರ್ ಯೋಜನೆ ಮಾಡಬಹುದಿತ್ತು. ಆದರೂ ಈಗ ತಡವಾಗಿಲ್ಲ” ಎಂದು ಹೇಳಿದರು‌..”ರಾಜಕಾರಣಿಗಳಿಗೆ, ಪೊಲೀಸರಿಗೆ, ಅಧಿಕಾರಿಗಳಿಗೆ ರಜೆ ಎಂಬುದು ಇರುವುದಿಲ್ಲ. ಕಾರ್ಮಿಕರ ದಿನದಂದೇ ಬೆಂಗಳೂರಿನ ಅಭಿವೃದ್ಧಿಯ ಪ್ರಮುಖ ಯೋಜನೆಗಳನ್ನು ಅನಾವರಣ ಮಾಡಿದ್ದೇವೆ” ಎಂದು ಹೇಳಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *