ಶಾಸಕ ಸಿ.ಬಿ. ಸುರೇಶ್ಬಾಬುರಿಂದ ಸ್ಥಳ ಪರಿಶೀಲನೆ.!
ಚಿಕ್ಕನಾಯಕನಹಳ್ಳಿ: ರೈತರು ಪಕೃತಿ ವಿಕೋಪದಿಂದಾಗಿ ಆಗಿರುವಂತಹ ಅನಾಹುತಗಳಿಗೆ ಸಂಬAದಿಸಿAದತೆ ಸ್ಥಳೀಯ ಗ್ರಾಮಾಭಿವೃದ್ದಿ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಸರ್ಕಾರದಿಂದ ಬರುವಂತಹ ಪರಿಹಾರನವ್ನು ಪಡೆದುಕೊಳ್ಳಿ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ತಾಲ್ಲೂಕಿನ ಹಾಲುಗೋಣದ ಬಳಿ ಸುನೀಲ್ ಎಂಬುವರಿಗೆ ಸೇರಿದ ಹಸು ತೆಂಗಿನ ಮರಬಿದ್ದು ಮೃತ ಪಟ್ಟ ಸ್ಥಳಕ್ಕೇ ಬೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು ಮೃತಪಟ್ಟಿರುವಂತಹ ಹಸುವಿನ ಮಾಲೀಕರಿಗೆ ಸಂಬAದ ಪಟ್ಟ ಪಶುಇಲಾಕೆಯವತಿಯಿಂದ ೪೦ಸಾವಿರ ಪರಿಹಾರವನ್ನು ನೀಡಲಾಗುವುದು ಎಂದ ಅವರು ಮುಂದಿನ ದಿನಗಳಲ್ಲಿ ಹಾಗು ಇತ್ತೀಚೇಗೆ ಬೀಸಿದ ಗಾಳಿ ಮಳೆಯಿಂದಾಗಿ ರೈತರಿಗೆ ಹಾನಿಯುಂಟಾಗಿದ್ದರೆ ಅದಕ್ಕೆ ಸಂಬAಧಿಸಿದAತೆ ಸೂಕ್ತ ದಾಖಲೆ ಹಾಗೂ ಮಾಹಿತಿಯನ್ನು ತಕ್ಷಣವೇ ನಿಮ್ಮ ಅಧಿಕಾರಿಗಳಿಗೆ ತಿಳಿಸಿ ಇದರಿಂದ ಪಕೃತಿ ವಿಕೋಪದ ಪರಿಹಾರದಿಂದ ಪರಿಹಾರ ಸಿಗಲು ಸಾದ್ಯವಾಗುತ್ತದೆ ಎಂದ ಅವರು ಮೃತಪಟ್ಟ ಹಸುವನ್ನು ಕಂಡು ಮರುಗಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಮಮತಾ ಎಂ, ಪಶುಇಲಾಖೆಯ ವೈದ್ಯಾಧಿಕಾರಿ ಚಂದ್ರಶೇಖರ್, ರೈತ ಸುನೀಲ್ ಮತ್ತಿತರರು ಇದ್ದರು.
For More Updates Join our WhatsApp Group :



