ಆದ್ರೂ ರೈತರಿಗಿಲ್ಲ ಖುಷಿ, ಆಗಿದ್ದೇನು?
ತುಮಕೂರು: ಕಲ್ಪತರು ನಾಡು ತುಮಕೂರಿನಲ್ಲಿ ಕೊಬ್ಬರಿ ಬೆಲೆ ಐತಿಹಾಸಿಕ ಮಟ್ಟ ತಲುಪಿದೆ. ಕ್ವಿಂಟಾಲ್ ಕೊಬ್ಬರಿ ಬೆಲೆ ₹38,000ಕ್ಕೆ ಏರಿಕೆಯಾಗಿ ಸರ್ವಕಾಲಿಕ ದಾಖಲೆ ನಿರ್ಮಿಸಿದೆ..
ಕೊಬ್ಬರಿಗೆ ಡಿಮ್ಯಾಂಡ್
ಪಾಶ್ಚಿಪಾತ್ಯ ದೇಶಗಳಾದ ಇರಾನ್ ಹಾಗೂ ಇಸ್ರೇಲ್ ಯುದ್ಧದ ಕಾರ್ಮೋಡದ ನಡುವೆ ಇತರೆ ರಾಷ್ಟ್ರಗಳಲ್ಲಿ ಸಮಸ್ಯೆ ಎದುರಾಗಿವೆ. ಅದೇ ರೀತಿ ಭಾರತ ಹಾಗೂ ನಮ್ಮ ರಾಜ್ಯ ಕರ್ನಾಟಕ ಸಹ ಈ ಸಮಸ್ಯೆಗಳಿಗೆ ಹೊರತಾಗಿಲ್ಲ. ವಿವಿಧ ವಸ್ತುಗಳ ಬೆಲೆ ದುಬಾರಿಯಾಗಿದ್ದು, ಜನ ಪರದಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ನಡುವೆ ಕಲ್ಪತರು ನಾಡು ಎಂದೇ ಖ್ಯಾತಿ ಪಡೆದ ತುಮಕೂರಿನಲ್ಲಿ ಕೊಬ್ಬರಿಗೆ ಎಲ್ಲಿಲ್ಲದ ಡಿಮ್ಯಾಂಡ್ ಹೆಚ್ಚಾಗಿದ್ದು, ಬೆಲೆ 38 ಸಾವಿರ ರೂ ತಲುಪಿದೆ.
ಭರ್ಜರಿ ಬೆಲೆ ಬಂದರೂ ರೈತರಿಗಿಲ್ಲ ಖುಷಿ
ಈ ಬೆಲೆ ಏರಿಕೆ ಮಾತ್ರ ಕೊಬ್ಬರಿ ಅವಲಂಬಿತ ತೆಂಗು ಬೆಳಗಾರರಲ್ಲಿ ಅಷ್ಟರ ಮಟ್ಟಿಗೆ ಸಂತಸ ಮೂಡಿಸಿಲ್ಲ. ಕಾರಣ ಇಳುವರಿ ಕಡಿಮೆ. ತೆಂಗು ಬೆಳೆಗಳಲ್ಲಿ ಕಾಣಿಸಿಕೊಳ್ಳುವ ನಾನಾ ರೀತಿಯ ರೋಗಗಳಿಗೆ ಪರಿಹಾರ ತಿಳಿಯದೇ ಬೆಳೆಗಾರರು ಕಂಗಾಲಾದರೆ, ಇತ್ತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆ ಆಲಿಸುತ್ತಿಲ್ಲ. ಹೀಗಾಗಿ ತೆಂಗು ಬೆಳೆಯ ಇಳುವರಿ ಕಡಿಮೆಯಾಗಿದ್ದು, ಬೆಲೆ ಹೆಚ್ಚಾದರೂ ಲಾಭವಿಲ್ಲ ಎನ್ನುತ್ತಾರೆ ರೈತರು. ಮತ್ತೊಂದೆಡೆ ವ್ಯಾಪಾರಿಗಳಿಗೂ ಸಹ ಬೆಲೆ ಏರಿಕೆ ಲಾಭ ಅಷ್ಟಕಷ್ಟೇ ಎನ್ನಲಾಗುತ್ತಿದೆ.
ಒಟ್ಟಾರೆ, ಇತರೆ ವಸ್ತುಗಳ ಬೆಲೆ ಏರಿಕೆ ನಡುವೆ ಈಗ ಕಲ್ಪತರು ನಾಡು ತುಮಕೂರಿನಲ್ಲೂ ಸಹ ಕೊಬ್ಬರಿ ಬೆಲೆ ಗಗನಕ್ಕೇರಿದ್ದು, ಖರೀದಿ ಬಲು ದುಬಾರಿ ಎಂಬಂತಾಗಿದೆ. ಈ ಬೆಲೆಗೆ ನಷ್ಟ ಕಡಿಮೆಯಾಗುತ್ತದೇ ಹೊರತು ಲಾಭವಿಲ್ಲ ಎನ್ನುವುದು ರೈತರ ಮಾತಾಗಿದೆ.
For More Updates Join our WhatsApp Group :




