ಕಾಲುವೆಗಳ ಹೂಳೆತ್ತುವ ಕಾಮಗಾರಿ ತ್ವರಿತಗೊಳಿಸಲು D.S ರಮೇಶ್ ಸೂಚನೆ.!

ಕಾಲುವೆಗಳ ಹೂಳೆತ್ತುವ ಕಾಮಗಾರಿ ತ್ವರಿತಗೊಳಿಸಲು D.S ರಮೇಶ್ ಸೂಚನೆ.!

ಮಳೆಗಾಲಕ್ಕೂ ಮುನ್ನ ಬೆಂಗಳೂರು ಪೂರ್ವ ಪಾಲಿಕೆಯ ಅಲರ್ಟ್: ರಾಜಕಾಲುವೆ ಸ್ವಚ್ಛತೆಗೆ ಯುದ್ಧೋಪಾದಿ ಕ್ರಮ

ಬೆಂಗಳೂರು: ಮುಂಗಾರು ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆ ನೀರು ನಿರ್ವಹಣೆ ಹಾಗೂ ಮೂಲಸೌಕರ್ಯ ಕಾಮಗಾರಿಗಳಿಗೆ ವೇಗ ನೀಡಲಾಗಿದೆ. ಆಯುಕ್ತ ಡಿ.ಎಸ್. ರಮೇಶ್ ಅವರು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. ಗೆದ್ದಲಹಳ್ಳಿ ಪ್ರದೇಶದಲ್ಲಿ ನಡೆಯುತ್ತಿರುವ ರೈಲ್ವೆ ವೆಂಟ್ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಒಂದು ಕಾಂಕ್ರೀಟ್ ಬಾಕ್ಸ್ ಪುಶಿಂಗ್ ಕಾರ್ಯ ಪೂರ್ಣಗೊಂಡಿರುವುದನ್ನು ಗಮನಿಸಿ ಉಳಿದ ಕಾಮಗಾರಿಗಳನ್ನು ಮೇ 30ರೊಳಗೆ ಮುಗಿಸಲು ಸೂಚಿಸಿದರು.

ಇದೇ ವೇಳೆ ವಿಜ್ಞಾನಪುರ, ರಾಮಮೂರ್ತಿ ನಗರ ಮತ್ತು ಕಲ್ಕೆರೆ ಪ್ರದೇಶಗಳ ರಾಜಕಾಲುವೆಗಳಲ್ಲಿ ನಡೆಯುತ್ತಿರುವ ಹೂಳೆತ್ತುವ ಹಾಗೂ ಸ್ವಚ್ಛತಾ ಕಾರ್ಯಗಳನ್ನೂ ಪರಿಶೀಲಿಸಲಾಯಿತು. ಮಳೆಗಾಲ ಆರಂಭಕ್ಕೂ ಮುನ್ನ ಎಲ್ಲಾ ಕಾಲುವೆಗಳಿಂದ ಹೂಳು, ಮಣ್ಣು, ತ್ಯಾಜ್ಯ ಮತ್ತು ಗಿಡಗಂಟಿಗಳನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಪ್ರಮುಖ ಕಾಲುವೆಗಳಿಗೆ ಸಂಪರ್ಕಿಸುವ ದ್ವಿತೀಯ ಹಾಗೂ ತೃತೀಯ ಕಾಲುವೆಗಳ ಸಂಪರ್ಕ ಕಡಿತವಾಗದಂತೆ ಎಚ್ಚರ ವಹಿಸಲು ನಿರ್ದೇಶನ ನೀಡಲಾಗಿದೆ. ಜೊತೆಗೆ ಕಾಲುವೆ ಮತ್ತು ರಸ್ತೆ ಬದಿ ಚರಂಡಿಗಳಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಹಾಗೂ ಬ್ಲಾಕ್ ಸ್ಪಾಟ್ ಪ್ರದೇಶಗಳಲ್ಲಿ ಮಾರ್ಷಲ್ ಗಸ್ತು ಹೆಚ್ಚಿಸಲು ಸೂಚಿಸಲಾಗಿದೆ.

ನಗರದ ತಗ್ಗು ಪ್ರದೇಶಗಳು, ಪ್ರಮುಖ ರಸ್ತೆಗಳು ಮತ್ತು ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುವ ಸಮಸ್ಯೆ ತಪ್ಪಿಸಲು ಅಗತ್ಯ ಮೂಲಸೌಕರ್ಯ ಬಲಪಡಿಸಲಾಗುತ್ತಿದೆ. ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ನಾಗರಿಕರಿಗೆ ಸುರಕ್ಷಿತ ಪರಿಸರ ಒದಗಿಸಲು ಪಾಲಿಕೆ ಬದ್ಧವಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *